೧೫೩೩ ರ ಸಮಯ : ಹೊಸ ಬದಲಾವಣೆ
ನಿಕೊಲಸ್ ಕೋಪರ್ನಿಕಸನ ಸೂರ್ಯಕೇಂದ್ರ ವಾದದಿಂದ ಆರಂಭವಾಯಿತು.
ಎಲ್ಲಾ ಗ್ರಹಗಳು ತಮ್ಮ ತಮ್ಮ ಕಕ್ಷೆಯಲ್ಲಿ ಸೂರ್ಯನನ್ನು ವೃತ್ತಾಕಾರದಲ್ಲಿ ಸುತ್ತುತ್ತವೆ ಎಂದು ಈತ ಸಾರಿದನು.
ಇದರಲ್ಲಿ ಭೂಮಿಯು ಸಹ ಒಳಗೊಂಡಿತು. ಸಾಮಾನ್ಯರಿಗೆ ಇದು ನಂಬಲಿಕ್ಕಾಗಲಿಲ್ಲ. ಯಾವ ಧರ್ಮ ಗಂಥದಲ್ಲಿಯೂ ಇಂತಹ ಉಲ್ಲೇಖ ಇರಲಿಲ್ಲ. ಆದ್ದರಿಂದ ಈ ಸತ್ಯವನ್ನು ಕೋಪರ್ನಿಕಸನು ಪ್ರಕಟಿಸಲಿಲ್ಲ. ಕೊನೆಗೆ ತನ್ನ ಜೀವನದ ಅಂತಿಮ ದಿನಗಳಲ್ಲಿ ಇದನ್ನು ಮುದ್ರಿಸಲು ಒಪ್ಪಿಕೊಂಡನು.
ಟೈಕೋ ಬ್ರಾಹೆ ಮತ್ತು ಕೆಪ್ಲರರು ಆಕಾಶಕಾಯಗಳ ಅಧ್ಯಯನ ಗೈದು ಸಾವಿರಕ್ಕೂ ಅಧಿಕ ನಕ್ಷತ್ರಗಳ ಆಕಾಶಪಟ್ಟಿ ನಿರ್ಮಿಸಿದರು. ೧೬೦೧ ರಲ್ಲಿ ಟೈಕೋನ ಮರಣದ ನಂತರ ೧೬೦೯ ರಲ್ಲಿ ಕೆಪ್ಲರನು ಮಂಗಳ ಗ್ರಹದ ಚಲನ ಪಥವು ದೀರ್ಘ ವೃತ್ತದ್ದಾಗಿದೆ ಎಂದು ಪ್ರಕಟಿಸಿದನು. ನಂತರ ೧೬೨೭ರಲ್ಲಿ ತನ್ನ ಗ್ರಹ ಚಲನ ನಿಯಮಗಳನ್ನು ಪ್ರಕಟಿಸಿದನು.
೧೬೧೦ರಲ್ಲಿ ಗೆಲಿಲಿಯೋ ತನ್ನ ಟೆಲಿಸ್ಕೋಪ್ ಬಳಸಿ ಗುರುಗ್ರಹದ ಅಧ್ಯಯನಗೈದನು. ಈತನು ಗುರುಗ್ರಹದ ನಾಲ್ಕು ಉಪಗ್ರಹಗಳನ್ನು ಶೋಧಿಸಿದನು. ಈತನ ಶೋಧವು ಸೂರ್ಯಕೇಂದ್ರವಾದಕ್ಕೆ ಪೂರಕವಾಗಿತ್ತು. ಆದ್ದರಿಂದ ಭೂಮಿಯು ಸೂರ್ಯನನ್ನು ಸುತ್ತುತ್ತದೆಂದು ಪ್ರಕಟಿಸಿದನು. ದಿಗುಲುಗೊಂಡ ಧರ್ಮಾಂಧರು ಈತನನ್ನು ಕೊನೆಯುಸಿರಿನವರೆಗೆ ಗ್ರಹಬಂಧನಕ್ಕೆ ಒಳಪಡಿಸಿದರು.
ಈ ಮೇಲಿನ ಖಗೋಳದ ಹೊಸತಿರುವು, ಮಾನವರಲ್ಲಿ ಹೊಸ ಚಿಂತನೆಗೆ ಕಾರಣವಾಯಿತು. ಈ ವಿಶ್ವದ ವೆವಸ್ಥೆಯು ತನ್ನದೇ ಆದ ನಿಯಮಗಳನ್ನು ಹೊಂದಿದೆ ಎಂದುಕೊಂಡರು. ನಮ್ಮ ಧರ್ಮವು ಕೇವಲ ಮನುಕುಲಕ್ಕೆ ಮಾತ್ರ ಸೀಮಿತವಾಗಿದೆ ಎಂದರು. ವಿಶ್ವದ ಧರ್ಮವೇ ಬೇರೆ, ಅದರ ನಿಯಮವೇ ಬೇರೆ ಎಂದು ಹೊಳೆಯತೊಡಗಿತು. ಈ ಕಾರಣಗಳಿಂದ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಬಣಗಳಲ್ಲಿ ವಿಚಾರ ಮತಭೇದವು ಬೆಳೆಯುತ್ತ ನಡೆಯಿತು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದು.
೧೬೧೮ರಿಂದ ೧೬೪೮ರ ವರೆಗೆ ಮೂವತ್ತು ವರುಷಗಳ ಕಾಲ ಯೂರೋಪ್ ಖಂಡದಲ್ಲಿ ಕಾದಾಟಗಳು ನಡೆದವು. ಆಗಬಾರದೆಲ್ಲವು ಆಯಿತು. ಧರ್ಮಗುರುಗಳ, ಅರಸರ ಸ್ಥಾನಗಳು ಇತರ ಮಾನವರಿಗಿಂತ ಹೇಗೆ ಬೇರೆ ಅನ್ನುವ ಕಲ್ಪನೆಗಳು ಮೂಡಿದವು. ಅರಸನ ಅಧಿಕಾರಗಳಿಗೆ ಕಡಿವಾಣ ಹಾಕುವ ಹಿಕಮತಿಯ ರೂಪದಲ್ಲಿ ಸಾಮಾನ್ಯ ಜನರ ಸಭೆ ಸಮಾರಂಭಗಳು ನಡೆದವು. ಇದು ಯುರೋಪ ಖಂಡದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು.
೧೬೪೨ರಲ್ಲಿ ಇಂಗ್ಲೆಂಡ್ ನಲ್ಲಿ ರಾಜಕೀಯ ಕ್ರಾಂತಿ ಆರಂಭವಾಯಿತು. ೧೬೪೯ರಲ್ಲಿ ಅಲ್ಲಿಯ ಅರಸನಾದ ಚಾರ್ಲ್ಸ್ ನಿಗೆ ಶಿರಛೇದನಮಾಡಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. ಮುಂದೆ ಇದರಂತೆಯೇ ಅಮೇರಿಕಾ ಕ್ರಾಂತಿ, ಫ್ರೆಂಚ್ ಕ್ರಾಂತಿಗಳು ಸಂಭವಿಸಿದವು.
ರಾಜಕೀಯ ವ್ಯವಸ್ಥೆಯಲ್ಲಿ ಪೂರ್ಣ ಬದಲಾವಣೆಗಳು ಕಾಣತೊಡಗಿದವು. ಕೊನೆಗೆ ವಿಜ್ಞಾನದ ತಳಹದಿಯಲ್ಲಿ ನಿಸರ್ಗ ಅಧ್ಯಯನ ಗೈಯಲು ಸಂಘಟನೆಗಳು ಹುಟ್ಟಿಕೊಂಡವು.
೧೬೬೨-ಲಂಡನ್ ನಗರದಲ್ಲಿ ರಾಯಲ್ ಸೊಸೈಟಿ ಹುಟ್ಟಿಕೊಂಡಿತು.
೧೬೬೬- ಪ್ಯಾರಿಸ್ ನಲ್ಲಿ ಫ್ರೆಂಚ್ ಅಕಾಡಮಿ ಆಫ್ ಸೈನ್ಸ ಹುಟ್ಟಿಕೊಂಡಿತು.
No comments:
Post a Comment