Tuesday, 9 November 2021

 ಅರೋಗ್ಯ ಸಿರಿ:

ಗುಳಿಗೆಗಿಂತ ಆಹಾರವೇ ಮುಖ್ಯ ಎನ್ನುವುದು ಮೊದಲ ಹೆಜ್ಜೆ. ಆಹಾರ ಬದಲಾಯಿಸಿ ಅರೋಗ್ಯ ಉಳಿಸಿಕೊಳ್ಳಿ.

ನಮ್ಮ ಆಹಾರ ಸರಿ ಇದ್ದರೆ ಯಾವ ಔಷಧ ಬೇಕಾಗಿಲ್ಲ. ನಮ್ಮ ಆಹಾರ ಸರಿ ಇಲ್ಲದಿದ್ದರೆ, ಯಾವ ಔಷಧಿಯು ಕೆಲಸ ಮಾಡಲ್ಲ.

ಚಹಾ, ಕಾಫಿ, ಹಾಲು ಮತ್ತು ಸಕ್ಕರೆ ಬಿಟ್ಟುಬಿಡಿ. ಹಾಲಿನಲ್ಲಿ ಹಾರ್ಮೋನುಗಳು ತುಂಬಿವೆ. ಕಾಫಿ ಕುಡಿಯುವುದನ್ನು ನಿಲ್ಲಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಮಾಂಸ ಮೊಟ್ಟೆ ತಿನ್ನಬೇಡಿ. ಅಕ್ಕಿ, ಗೋಧಿ ಹಾಲು ಸಕ್ಕರೆ ಬೇಡವೇ ಬೇಡ. ಅಕ್ಕಿ ಗೋಧಿ ತಿನ್ನಬೇಡಿ ಇದು ಒಳ್ಳೆಯ ಆಹಾರ ಅಲ್ಲ [ಇದರಲ್ಲಿ ನಾರಿನಂಶ ಇಲ್ಲ ].

ನಮ್ಮ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದೇ ನಮಗೆ ರೋಗ ಬರಲು ಕಾರಣ.

ರಾತ್ರಿ ಹೊತ್ತು ಕತ್ತಲಲ್ಲಿ ಚೆನ್ನಾಗೆ ನಿದ್ದೆ ಮಾಡಿರಿ. ಬಾಯಿ ಮುಚ್ಚಿ ಬಿದ್ದುಕೊಳ್ಳಿ. ನಿರ್ನಾಳ ಗ್ರಂಥಿಗಳು ಚೈತನ್ಯವನ್ನು ತುಂಬುತ್ತವೆ.

ಸಿರಿಧಾನ್ಯವನ್ನು ಇಡೀ ಮಾನವ ಕುಲ ಬಳಸಬೇಕು. ಸಿರಿಧಾನ್ಯ ನಿಧಾನವಾಗಿ ಅರೋಗ್ಯ ಸುಧಾರಿಸುವ ಕ್ರಮ.

ಕಾಫಿ ಟಿ ಬಿಟ್ಟರೆ, ೫೦% ರೋಗನಿರೋಧಕ ಶಕ್ತಿ ಬರುತ್ತದೆ. ಸಕ್ಕರೆ ಕಾಫಿ ಟೀ ಬಿಡಬೇಕು. ಕಷಾಯ ಕುಡಿಯಿರಿ. ಕೇವಲ ಸಿರಿಧಾನ್ಯಗಳನ್ನೇ ಬಳಸಿ. ನಿಮ್ಮ ಆರೋಗ್ಯ ಗ್ಯಾರಂಟಿ.

ಸಿರಿಧಾನ್ಯಗಳನ್ನು ಎರಡು ಅಥವಾ ಮೂರು ತಾಸು ನೆನೆಹಾಕಿ ಆಮೇಲೆ ಅಡಿಗೆ ಮಾಡಿ ತಿನ್ನಿರಿ. ಇದರಿಂದ ಪೂರ್ಣ ಲಾಭ ಪಡೆಯುವಿರಿ.ರಾತ್ರಿ ಮಲಗುವುದಕ್ಕೆ ಮುನ್ನ, ಒಂದು ಗ್ಲಾಸ್ ಅಕ್ಕಿಗೆ ಎರಡು ಗ್ಲಾಸ್ ನೀರು ಹಾಕಿ ನೆನೆಯಿಡಿರಿ. ಐದು ಪ್ರಕಾರದ ಸಿರಿಧಾನ್ಯದ ಅಕ್ಕಿಯನ್ನು ಎರಡು ದಿನಕ್ಕೆ ಒಮ್ಮೆ ಬದಲಾಯಿಸಿರಿ.

 ಸಿರಿಧಾನ್ಯಗಳು ನಿಧಾನವಾಗಿ ಸಕ್ಕರೆ ಬಿಡುವುದರಿಂದ ಶರೀರದ ನಿರ್ನಾಳ ಗ್ರಂಥಿಗಳು ತಮ್ಮ ಕೆಲಸವನ್ನು ಸರಾಗವಾಗಿ ಮಾಡುತ್ತವೆ. ರಕ್ತ ಶುದ್ಧವಾಗುತ್ತದೆ. ವಾರಕ್ಕೊಮ್ಮೆ ಒಂದು ಎಳ್ಳಿನ ಉಂಡೆ ತಿನ್ನುವುದು ಒಳ್ಳೆಯ ಅಭ್ಯಾಸ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಬಳಸಿರಿ. ಇದರಿಂದ ಕೂದಲು ಉದುರುವುದಿಲ್ಲ.

ಗಾಣದ ಎಣ್ಣೆ , ಕುಸುಬೆ ಎಣ್ಣೆ, ಸೇಂಗಾ ಎಣ್ಣೆ , ಕೊಬ್ಬರಿ ಎಣ್ಣೆ ಬಳಸಿ. ಹುಣುಚೇ ಚಿಗುರು, ನುಗ್ಗೆ ಸೊಪ್ಪಿನ ಹೂವು ಬಳಸಿರಿ. ಸಿರಿಧಾನ್ಯಗಳೇ ನಿಮ್ಮ ಆಹಾರವಾಗಿರಲಿ.

ಏಳು ಪ್ರಕಾರದ ಕಷಾಯಗಳನ್ನು [ ಗಾರಿಕೀ, ತುಳಸಿ, ಅಮ್ರತಬೆಳ್ಳಿ, ಬಿಲ್ವ, ಹೊಂಗೆ, ಬೇವು, ಮತ್ತು ಅರಳಿ] ಕೇವಲ ೨೮ ದಿನಗಳವರೆಗೆ ಕುಡಿಯಿರಿ. ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ. ಮುಂದಿನ ಒಂದು ವರುಷದ ವರೆಗೆ ರೋಗ ಬರುವುದಿಲ್ಲ. ಕಷಾಯ ಮತ್ತು ಐದು ಪ್ರಕಾರದ ಸಿರಿಧಾನ್ಯದಿಂದ ನಿಮ್ಮ ಅರೋಗ್ಯ ಗ್ಯಾರಂಟಿ. ೪೫ ದಿನಗಳಲ್ಲಿ ಅರೋಗ್ಯ ಸುಧಾರಿಸಿಕೊಳ್ಳುತ್ತದೆ. ಏನು ಖರ್ಚು ಇಲ್ಲದೆ ಅರೋಗ್ಯ ಪಡೆಯಿರಿ.

ಕ್ಯಾಲ್ಸಿಯಂ ಕೊರತೆ ನೀಗಿಸಲು, ಎಳ್ಳು ಉಂಡೆ, ರಾಗಿ ಮುದ್ದೆ, ಸಜ್ಜೆ ರೊಟ್ಟಿ ಬಳಸಿರಿ. ಹಾಲು ಬೇಡ.

ನವಣೆ ಮತ್ತು ಕೊರಳೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಥೈರಾಯ್ಡ್ ಸಮಸ್ಯೆ ಇರುವವರು ಸಾಮೆ ಮೂರೂ ದಿನ, ಇತರೆ ಸಿರಿಧಾನ್ಯ ಒಂದೊಂದು ದಿನ ಬಳಸಿ, ಮತ್ತು ಕೊಬ್ಬರಿ ಎಣ್ಣೆ, ಕುಸುಬೆ ಎಣ್ಣೆ, ಮತ್ತು ಎಳ್ಳೆಣ್ಣೆ ಎರಡು ಚಮಚ ಕುಡಿಯಿರಿ. ನಿಧಾನವಾಗಿ ರೋಗದಿಂದ ಮುಕ್ತಿ ಸಿಗುತ್ತೆ.

ಕಿಡ್ನಿ ಕಲ್ಲು ಕರಗಿಸಲು, ಅರ್ಕಾ  ಸಾಮೆ ಮತ್ತು ಉದಲು ಹೆಚ್ಚಿಗೆ ಬಳಸತಕ್ಕದ್ದು ಐದರಲ್ಲಿ. ಪಪಾಯ ಹಣ್ಣು ಮತ್ತು ಸೀತಾಫಲ ಹಣ್ಣು ಉತ್ತಮ. ಕುಸುಬೆ ಎಣ್ಣೆ ಬಳಸಿ. ಪುದಿನಾ ಕಷಾಯ ಕೊತ್ತಂಬರಿ ಕಷಾಯ ಬಳಸಿರಿ.

ಇತರೆ ಸ್ಥಳದ [ಗಾಲ್ ಬ್ಲ್ಯಾಡರ್] ಕಲ್ಲು ಕರಗಿಸಲು ಕೊರಳೆ ಮತ್ತು ನವಣೆ ಹೆಚ್ಚಾಗಿ ಬಳಸಿರಿ. ಸಾಸುವೆ ಎಣ್ಣೆ ಬಳಸಿರಿ. ಬಾಳೆ ದಿಂಡು ಕಶಾಯ, ನಾಗದಾಳಿ ಸೊಪ್ಪಿನ ಕಶಾಯ ಬಳಸಿ.

ನೆನಪಿನ ಶಕ್ತಿ ಕಳೆದುಕೊಳ್ಳುವ ಪಾರ್ಕಿನ್ಸನ್ ರೋಗ ನಿವಾರಣೆಗೆ, ಅರ್ಕ ಅಕ್ಕಿ ಮತ್ತು ಸಾಮೆ ಅಕ್ಕಿ ಬಳಸಿರಿ.ಅರಸಿನ ಕಷಾಯ, ನುಗ್ಗೆ ಹೂವಿನ ಕಷಾಯ ಬಳಸಿರಿ.

ಗ್ಯಾಂಗ್ರಿನ್ ಸಮಸ್ಯೆ ಇರುವವರು ಚಂಡು ಹೂವಿನ ಎಳೆಗಳ ಕಷಾಯ ಕುಡಿಯಿರಿ.

ಪಾರ್ಶ್ವವಾಯು ಸಮಷ್ಯ ಇರುವವರು, ನವಣೆ ಹಾಗು ಆರ್ಕಾ ಬಳಸಬೇಕು. ಅರಿಷಿಣದ ಕಷಾಯ ಕುಡಿಯಬೇಕು.