Saturday, 26 December 2020

ಜ್ಞಾನ ಪುನರುಜ್ಜೀವನ ಕಾಲದ ಪ್ರಮುಖ ಘಟನೆಗಳು

 

ಜ್ಞಾನ ಪುನರುಜ್ಜೀವನ ಕಾಲದ ಪ್ರಮುಖ ಘಟನೆಗಳು 

೧೨೦೦- ಯುರೋಪ ಖಂಡದಲ್ಲಿ ವಿಶ್ವವಿದ್ಯಾಲಯಗಳ ಸ್ಥಾಪನೆ.

೧೨೭೬- ಇಟಲಿಯಲ್ಲಿ ಕಾಗದ ತಯ್ಯಾರಿಕೆ ಆರಂಭ.

೧೪೫೦ - ಜರ್ಮನಿಯಲ್ಲಿ ಮುದ್ರಣ ಯಂತ್ರದ ಆವಿಸ್ಕಾರ.

೧೪೯೨- ಕೊಲಂಬಸನಿಂದ ಅಮೇರಿಕಾ ಖಂಡದ ಶೋಧ.

೧೪೯೮ - ವಾಸ್ಕೋಡಗಾಮನಿಂದ ಭಾರತಕ್ಕೆ ಜಲಮಾರ್ಗ ಶೋಧ.

೧೫೨೨ - ಫರ್ಡಿನಂಡ ಮೆಗಲನನ ಹಡಗಿನಲ್ಲಿ ಪ್ರಯಾಣಗೈದು ಭೂಮಿಯನ್ನು ಸುತ್ತುವುದು.

೧೫೪೦- ನಿಕೊಲಾಸ್ ಕೊಪರ್ನಿಕಸನಿಂದ ಸೂರ್ಯಕೇಂದ್ರವಾದದ ಮಂಡನೆ.

೧೫೬೩- ಟೈಕೋಬ್ರಾಹೇ ಬರಿಗಣ್ಣಿನಿಂದ ಸತತವಾಗಿ ನಕ್ಷತ್ರಗಳ ವೀಕ್ಷಣೆ ಗೈದು, ನಕ್ಷತ್ರ ಪಟಲ ನಿರ್ಮಾಣ.

೧೬೧೦ - ಗೆಲಿಲಿಯೊ ಗೆಲಿಲಿಯಿಂದ ಗುರು ಗ್ರಹದ ಉಪಗ್ರಹಗಳ ಶೋಧ.

೧೬೧೮-೧೬೪೮ ಯುರೋಪ ಖಂಡ ದಲ್ಲಿ ಮೂವತ್ತು ವರುಷಗಳ ಕಾಲ ಸತತವಾಗಿ ಯುಧಗಳು ನಡೆದವು.

೧೬೨೦- ಕೆಪ್ಲರನ ಗ್ರಹಗಳ ಚಲನೆಯ ನಿಯಮಗಳು.

೧೬೪೨- ಇಂಗ್ಲೈಂಡನಲ್ಲಿ ಸಾಮಾಜಿಕ ಕ್ರಾಂತಿಯ ಆರಂಭ ಹಾಗು ಪ್ರಜಾಪ್ರಭುತ್ವದ ಉದಯ.

೧೬೬೦ - ನ್ಯುಟನನ ಚಲನೆಯ ನಿಯಮಗಳು, ಹಾಗು ವಿಸ್ವ ಗುರುತ್ವ ನಿಯಮ  ಮಂಡನೆ.

೧೬೮೮- ಇಂಗ್ಲಿಶ ಬಿಲ್ ಆಫ್ ರೈಟ್ಸ ಅಸ್ತಿತ್ವಕ್ಕೆ ಬಂದಿತು. ಅರಸನ ಹಕ್ಕುಗಳು ಸೀಮಿತಗೊಂಡವು.

೧೬೬೨- ಲಂಡನ್ ನಗರದಲ್ಲಿ ರಾಯಲ್ ಸೊಸೈಟಿಯ ಸ್ಥಾಪನೆಗೊಂಡಿತು.

೧೬೬೬- ಫ್ರೆಂಚ್ ಅಕಾಡಮಿ ಆಫ್ ಸೈನ್ಸ ಸ್ಥಾಪನೆಗೊಂಡಿತು.

೧೬೬೮- ನ್ಯುಟನರು ಕಿರಣ ಪ್ರತಿಫಲನ ಟೆಲಿಸ್ಕೋಪ್ ರಚಿಸಿದರು.

೧೬೭೨- ನ್ಯುಟನರು ರಾಯಲ್ ಸೊಸೈಟಿಯ ಸದಸ್ಯರಾದರು.

೧೬೮೭- ನ್ಯುಟನ್ನರ ಗ್ರಂಥ ಪ್ರಿಂಸಿಪಿಯಾ ಮೆಥೆಮೆಟಿಕಾ ಪ್ರಕಟವಾಯಿತು.

೧೭೦೦- ಜರ್ಮನಿಯಲ್ಲಿ ಬರ್ಲಿನ್ ವಿಜ್ಞಾನ ಅಕಾಡಮಿ ಸ್ಥಾಪನೆಗೊಂಡಿತು.

೧೭೦೫- ಎಡ್ಮಂಡ್ ಹ್ಯಾಲಿಯು ಧೂಮಕೇತುಗಳು ಸಹ ಗ್ರಹಗಳಂತೆ ಸೂರ್ಯನನ್ನು ದೀರ್ಘವ್ರತ್ತದಲ್ಲಿ 

             ಸುತ್ತುತ್ತವೆಂದು ಪ್ರತಿಪಾದಿಸಿದನು.

೧೭೮೧- ಜೇಮ್ಸ ವ್ಯಾಟರವರು  ಸುಧಾರಿತ ಉಗಿಯಂತ್ರ ನಿರ್ಮಿಸಿದರು. ಈ ಯಂತ್ರಗಳು ಔದ್ಯೋಗಿಕ ಕ್ರಾಂತಿಗೆ ಕಾರಣವಾದವು.