Sunday, 4 October 2020

Birth and development of modern Science

 



ಅಧುನಿಕ ವಿಜ್ಞಾನದ ಹುಟ್ಟು

ಬಹಳ ಹಿಂದಿನ ಕಾಲದಲ್ಲಿ ಆದಿಮಾನವರು ಗುಹೆಗಳಲ್ಲಿ ವಾಸಿಸುತ್ತಿದ್ದರು. ಗುಂಪು ಗುಂಪಾಗಿ ಇರುತ್ತಿದ್ದರು.  ಪ್ರಾಣಿಗಳನ್ನು ಪಳಗಿಸುವ ಕಲೆ ಕಲಿತರು.ಕೃಷಿಯಲ್ಲಿ ಪರಿಣತಿ ಪಡೆದರು.

ಊರುಗಳು ಬೆಳೆದವು ಮತ್ತು ನಾಗರಿಕತೆ ವಿಸ್ತರಿಸಿತು.

ಪಶು ಸಾಕಣೆ ಮತ್ತು ಒಕ್ಕಲುತನದ್ಲಲಿ  ಮಾನವ ತೊಡಗಿಸಿಕೊಂಡ. ಗ್ರಹಣಿಯರು ಮನೆ ಕೆಲಸದಲ್ಲಿ ಹಾಗು ವ್ಯಾಪಾರಿಗಳು, ಉದ್ಯೋಗಿಗಳು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡರು.

 

1200-ಇಟಲಿ ಹಾಗು ಇಂಗ್ಲೈಂಡಗಳಲ್ಲಿ ವಿಶ್ವವಿದ್ಯಾಲಯಗಳ ಆರಂಭ.

1300-ಲೋಹಗಳಿಗಾಗಿ ಹುಡುಕಾಟ.

ಬಂಗಾರ, ತಾಮ್ರ, ಲೋಹಗಳ ಶೋಧ ಮತ್ತು ಬಳಕೆ.


1400-ಹಡಗು ಕಟ್ಟಿ ಗಾಳಿಯ ಒತ್ತು-ಬಲವನ್ನು ಬಳಸಿ ಸಮುದ್ರದಲ್ಲಿ ತೇಲಾಟ ಮತ್ತು ಹೊಸ ಭೂಖಂಡಗಳ ಹುಡುಕಾಟ. ಕೊಲಂಬಸನ ಸಮುದ್ರಯಾನ, ವಸಾಹತುಗಳ ಸ್ಥಾಪನೆ.

1498-ವಾಸ್ಕೋಡಿಗಾಮನು ಯುರೋಪ ಖಂಡದಿಂದ ಭಾರತಕ್ಕೆ ಬರುವ ಜಲಮಾರ್ಗವನ್ನು ಕಂಡು

ಹಿಡಿದನು.


ಆಧುನಿಕ ವಿಜ್ಞಾನ ಬೆಳೆದದ್ದು ಕ್ರಿಸ್ತ ಶಕ  1500 ರ ನಂತರದಲ್ಲಿ.


ವಿಶ್ವದ ಸಮಸ್ತ ಕ್ರೀಯೆಗಳಲ್ಲಿಯೂ ನಿರ್ದಿಷ್ಟ ಕ್ರಮವಿದೆ. ಈ ಕ್ರಮಗಳನ್ನು ಗ್ರಹಿಸಿ ಯುಕ್ತ ಭಾಷೆಯಲ್ಲಿ ವಿವರಿಸಬಲ್ಲ ಸಾಮರ್ಥ್ಯ ಮಾನವಮತಿಗಿದೆ.


ತಪಾಶೆಣೆಗೆಂದು ತೆಗೆದುಕೊಂಡ ಸಮಸ್ಯೆ ಕುರಿತಂತೆ, ವ್ಯವಸ್ಥಿತವಾಗಿ ಮಾಹಿತಿಗಳನ್ನು ಕಲೆಹಾಕುವುದು, ಇವುಗಳನ್ನು ಕ್ರಮಬದ್ಧವಾಗಿ ಅಳವಡಿಸಿ ವಿಶ್ಲೇಷಿಸಿ ಪ್ರಯೋಗಮಾಡುವುದು, ಮತ್ತು ಸಂಗತಿಗೆ ಸರಿದೂಗುವ ಸೂತ್ರ ನಿರೂಪಣೆ ಗೈಯುವುದು. ಇದೊಂದು ವ್ಯವಸ್ಥಿತ ಜ್ಞಾನ ಯಾತ್ರೆ. ಪ್ರಯೋಗ ಮಾರ್ಗ ಮತ್ತು ಪ್ರಯೋಗ ಬುದ್ಧಿ ಯೋಗ.


1600-ಸತ್ಯಾನ್ವೇಶಣೆಯ ಹೊಸ ತತ್ವಗಳು, ಮತ್ತು ಪ್ರಾಯೋಗಿಕ ಪರಿಶೀಲನಾ ಪಧತಿಯ ಉಗಮ.

ಪ್ರಯೋಗಗಳ ಆಧಾರದ ಮೇಲೆ ಸತ್ಯವನ್ನು ನಿರ್ಧರಿಸುವ ತೀರ್ಮಾನ.


ಕೊಪರ್ನಿಕಸನ ಸಿಧಾಂತ:

1600 ರ ಹೊತ್ತಿಗೆ ಖಗೋಲಶಾಸ್ತ್ರ ತಿರುವು ಕಂಡಿತು. ಈ ಭೂಮಿಯು ಜಗತ್ತಿನ ಕೇಂದ್ರ ಅಲ್ಲ, ಬದಲಿಗೆ ಸೂರ್ಯನು ಈ ಜಗದ ಕೇಂದ್ರವಸ್ತು ಎಂಬುದು ಸತ್ಯಸಂಗತಿಯಾಗಿ ಹೊರಹೊಮ್ಮಿತು.


1600 ರ ತರುವಾಯ ಗೆಲೆಲಿಯೋ ಅವರ ಟೆಲೆಸ್ಕೋಪ್ ಅನ್ವೇಷೆಣೆ ಹಾಗು ಆಕಾಶಕಾಯಗಳ ವೀಕ್ಷಣೆ ಯಿಂದ, ಕೊಪರ್ನಿಕಸರ ಸಿದ್ಧಾಂತಕ್ಕೆ ಪೂರಕ ಬಲ ದೊರೆಯಿತು.


1600-ನಿಕೊಲಸ್ ಕೋಪರ್ನಿಕಸ್ ರ ಸೂರ್ಯಕೇಂದ್ರವಾದದಿಂದ ನವಚೇತನ ಆರಂಭಗೊಂಡಿತು. ಖಗೋಳಶಾಸ್ತ್ರಕ್ಕೆ ಗೆಲಿಲಿಯೋ ಹಾಗು ಕೆಪ್ಲರರ ಕೊಡುಗೆ ಅಪಾರ.


1609- ಕೆಪ್ಲರ್ ನ ಗ್ರಹಗಳ ಚೆಲನೆಯ ನಿಯಮಗಳ ನಿರೂಪಣೆ.


1610- ಗೆಲೆಲಿಯೋ ಗೆಲಿಲೀ ತಮ್ಮ ಟೆಲಿಸ್ಕೋಪ್ ಬಳಸಿ, ಗುರುಗ್ರಹದ ನಾಲ್ಕು ಉಪಗ್ರಹಗಳನ್ನು

 ಶೋಧಿಸಿದರು.  They were called Galilean satellites .


1610- ಗೆಲೆಲಿಯೋ ಗೆಲಿಲೀ ಶುಕ್ರಗ್ರಹದ ಕಲೆಗಳನ್ನು [ಚಂದ್ರನ ಕಲೆಗಳಂತಿರುವ] ಪತ್ತೆಹಚ್ಚಿದರು.


1617-ಗೆಲೆಲಿಯೋ ಗೆಲಿಲೀ ಮೋಡದಂತೆ ಕಾಣುವ ಆಕಾಶ ಗಂಗೆಯು, ಒತ್ತೊತ್ತಾದ ನಕ್ಷತ್ರಗಳ 

ಪುಂಜವೆಂದು ತೋರಿಸಿದರು.


1633- ಗೆಲೆಲಿಯೋ ಗೆಲಿಲೀ ಭೂಮಿಯು ಸೂರ್ಯನನ್ನು ಸುತ್ತುತ್ತದೆ, ಎಂದು ಬರೆದುದಕ್ಕೆ,

 ಇದು ಬೈಬಲ್ ಧರ್ಮ ಗ್ರಂಥದ ವಿರೋಧಿ ಎಂದು, ಆತನನ್ನು ಗ್ರಹಬಂಧನಕ್ಕೆ  ಒಳಪಡಿಸಿದರು. His writings were in support of Copernican heliocentric system of universe.


1649- ಇಂಗ್ಲೆಂಡ್ ನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿತು. ಚಾರ್ಲ್ಸ್ ಅರಸನನ್ನು ಗಲ್ಲಿಗೇರಿಸಲಾಯಿತು.


1662-ಲಂಡನನಲ್ಲಿ ರಾಯಲ್ ಸೊಸೈಟಿಯ ಸ್ಥಾಪನೆಯಾಯಿತು.

1666-ತದನಂತರ  ಪ್ಯಾರಿಷ್ ನಲ್ಲಿ  ಫ್ರೆಂಚ್   ವಿಜ್ಞಾನ ಅಕಾಡಮಿಯ ಸ್ಥಾಪನೆ.

1661-ರಾಬರ್ಟ ಬಾಯ್ಲರವರ ವಾಯು ವತ್ತಡದ ನಿಯಮಗಳ ಶೋಧ. ಧಾತುವಿನ ಪರಿಕಲ್ಪನೆ.

         [The Sceptical Chymist in 1661]

1687- ಐಸಾಕ್ ನ್ಯೂಟನ ರ ಪ್ರಿನ್ಸಿಪಿಯಾ ಮೆಥೆಮ್ಯಾಟಿಕಾ ಪುಸ್ತಕ ಪ್ರಕಟವಾಯಿತು.[Principia Mathematica]

ನ್ಯೂಟನ್ ರಚಿತ ವಿಶ್ವ ಗುರುತ್ವ ನಿಯಮ :

M ಮತ್ತು m  ರಾಶಿಗಳಿರುವ ಎರಡು ಕಾಯಗಳ ನಡುವಿನ ಅಂತರ r ಆಗಿದ್ದರೆ, ಇವುಗಳ ನಡುವೆ ವರ್ತಿಸುವ ಗುರುತ್ವಾಕರ್ಷಣೆ ಬಲ  F = GMm/r2

ಭೂಮಿಯು ಸೂರ್ಯನ ಸುತ್ತ ಪರಿಭ್ರಮಿಸುವುದು ಮತ್ತು ಚಂದ್ರನು ಭೂಮಿಯನ್ನು ಪರಿಭ್ರಮಿಸುವುದು ಈ ನಿಯಮಕ್ಕೆ ಒಳಪಟ್ಟಿದೆ.


1688- ಪ್ರಜಾಪ್ರಭುತ್ವಗಳ ಸ್ಥಾಪನೆ ಮತ್ತು ಸಾಮಾಜಿಕ ನ್ಯಾಯ, ಪ್ರಜಾಹಿತ ಕೆಲಸಗಳು.


1700- ಜರ್ಮನಿಯಲ್ಲಿ ಬರ್ಲಿನ್ ವಿಜ್ಞಾನ ಅಕಾಡಮಿ ಸ್ಥಾಪನೆಯಾಯಿತು.


1705- ಖಗೋಳ ವಿಜ್ಞಾನಿ- ಎಡಮಂಡ್  ಹ್ಯಾಲಿಯು, 1337 ರಿಂದ 1698 ರ ವರೆಗೆ ಕಾಣಿಸಿಕೊಂಡ, 24

ಧೂಮಕೇತುಗಳ ಆಳವಾದ  ಅಧ್ಯಯನ ಗೈದು; 1531, 1607 ಮತ್ತು 1682 ಗಳಲ್ಲಿ ಕಾಣಿಸಿಕೊಂಡ

ಧೂಮಕೇತು ಒಂದೆ ಎಂದೂ, ಮತ್ತು ಅದು ಪುನಃ 1758ರಲ್ಲಿ ಕಾಣುವುದೆಂದು ಮುನ್ನುಡಿದನು.ಅವನು 1742 ರಲ್ಲಿ ಮರಣ ಹೊಂದಿದನು; ಧೂಮಕೇತುವು 1758 ರ ಕೊನೆಯಲ್ಲಿ ಪ್ರಕಟಗೊಂಡಿತು.  ಹರ್ಶಗೊಂಡ  ವಿಜ್ಞಾನಿಗಳು, ಅದನ್ನು ಹ್ಯಾಲಿ ಧುಮಕೇತು ಎಂದು ಕರೆದರು. 

ಧೂಮಕೇತುಗಳು ಗ್ರಹಗಳಂತೆ ಸೂರ್ಯನನ್ನು ಸುತ್ತುತ್ತವೆ ಎಂದು ಖಚಿತವಾಯಿತು.


1746- ಔದ್ಯೋಗಿಕವಾಗಿ ದೊಡ್ಡ ಪ್ರಮಾಣದಲ್ಲಿ ಗಂಧಕಾಮ್ಲದ ತಯ್ಯಾರಿಕೆ [Lead Chamber process].

1760-ಯುರೋಪ ಖಂಡದಲ್ಲಿ ಔದ್ಯೋಗಿಕ ಕ್ರಾಂತಿಯ ಆರಂಭ.

1769-ಪ್ರಥಮ ಬಾರಿಗೆ ಬಟ್ಟೆ ತಯ್ಯಾರಿಕೆಯಲ್ಲಿ ಉಗಿ ಯಂತ್ರದ ಬಳಕೆ.


1754-ಜೋಸೆಪ್ ಬ್ಲ್ಯಾಕ್ ರಿಂದ ಸುಣ್ಣದ ಕಲ್ಲಿನ ಪ್ರಯೋಗಗಳು. ಇಂಗಾಲದ ಡೈ ಆಕ್ಸಾಯಿಡ ಅನಿಲ ತಯ್ಯಾರಿಕೆ. [he called it as fixed air]


1762-1764 ರಲ್ಲಿ ಜೋಸೆಫ್ ಬ್ಲ್ಯಾಕ್ ಗುಪ್ತೋಷ್ಣದ ಅಧ್ಯಾಯನ ಗೈದರು. ಉಷ್ಣವು ಒಂದು ಪ್ರವಹನ ಶಕ್ತಿ ಎಂದು ಕಂಡುಕೊಂಡರು. ಉಪಕರಣ ತಯ್ಯಾರಕ ಜೇಮ್ಸ ವ್ಯಾಟ್ ಈ ತತ್ವ ಬಳಸಿ ಉಗಿ  ಯಂತ್ರಕ್ಕೆ ಹೊಸದಾಗಿ  ಒಂದು ಶೀತಲ-ಪೆಟ್ಟಿಗೆಯನ್ನು ಜೋಡಿಸಿದರು. ಈ ಸುಧಾರಣೆಯಿಂದ ಉಗಿಯಂತ್ರದ ಕಾರ್ಯ ಕ್ಷಮತೆಯಲ್ಲಿ ಹೆಚ್ಚಳ ಸಾಧ್ಯವಾಯಿತು. 


1766- ಹೆನ್ರಿ ಕೆವೆಂದಿಶ್ ರಿಂದ ಜಲಜನಕ ಅನಿಲದ ಅನ್ವೇಷಣೆ. 1784 ರಲ್ಲಿ ಹೆನ್ರಿ ಕೆವೆಂದಿಶ್ ಜಲಜನಕವು ಗಾಳಿಯಲ್ಲಿಉರಿದು  ನೀರು ಉಂಟಾಗುವುದನ್ನು ಅವಿಸ್ಕರಿಸಿದರು.


1774-ಜೋಸೆಫ್ ಪ್ರೀಸ್ಟ್ಲೆ ಯವರು ಆಮ್ಲಜನಕ ಅನಿಲ ಕಂಡುಹಿಡಿದರು.


1779-ಲಾವೋಸಿಯರ್ ರಿಂದ ಉರಿಯುವ ಪರಿಕಲ್ಪನೆಯ ವಿವರಣೆಗಳು. ದಹನ ಕ್ರಿಯ ಯಲ್ಲಿ ಆಮ್ಲಜನಕ ಅನಿಲದ ಪಾತ್ರದ ಸತ್ಯ ವಿವರಣೆ; ಲಾವೋಸಿಯರರ ರಾಸಾಯನಿಕ ಶಾಸ್ತ್ರದ ತಳಹದಿಗೆ ಕಾರಣವಾಯಿತು. 


ಧಾತುಗಳನ್ನು ಹೆಸರಿಸುವಲ್ಲಿ ಮತ್ತು ಹೊಸ ಹೊಸ  ಶಬ್ದಗಳ ಉಪಯೋಗವು ರಸಾಯನ ಶಾಸ್ತ್ರಕ್ಕೆ ಹೊಸ ಭಾಸೆ ಕೊಟ್ಟಿತು. ಲಾವೋಷಿಯೆರರು ಮೊದಲ ಬಾರಿಗೆ, ಅಂದು ತಿಳಿದಿರುವ ಎಲ್ಲಾ ಧಾತುಗಳ ಪಟ್ಟಿ ಮಾಡಿದರು. ಅವರು ರಾಸಾಯನಿಕ ಬದಲಾವಣೆಯಲ್ಲಿ ವಸ್ತುವಿನ ರಾಶಿ ಸ್ಥಿರವಾಗಿರುತ್ತದೆ ಎಂದು ತೋರಿಸಿದರು. ಆಧುನಿಕ ರಸಾಯನ ಶಾಸ್ತ್ರಕ್ಕೆ ಮೂಲಪುರುಷರಾದರು.


1780- ವಿಲಿಯಂ ಹರ್ಷೇಲ್ಲರು ಖಗೋಳ ವೀಕ್ಸ್ಹೆಣೆ ಗೈದು , ನ್ಯೂಟನ್ ರ ನಿಯಮಗಳ ಅನ್ವಯ ಎಲ್ಲೆಲ್ಲೂ ಸರಿ ಎಂದರು. ಈ ನಿಯಮಗಳು ಇಡೀ ವಿಶ್ವಕ್ಕೆ ಅನ್ವಯ ಎಂದು ಉದ್ಗರಿಸಿದರು.

William Herschel exclaimed that Newtons laws were indeed universal !


ಅಗಾಧವಾದ  [ನಕ್ಷೆತ್ರಪುಂಜದಲ್ಲಿ] ಆಕಾಶ ಗಂಗೆಯಲ್ಲಿ, ನಕ್ಷತ್ರವು  ಒಂದು ತುಣುಕು. ನಕ್ಷತ್ರದ 

ಮಹಾ ವ್ಯಾಪ್ತಿಯಲ್ಲಿ ಭೂಮಿ ಒಂದು ತುಣುಕು. ಭೂಮಿಯ ಮಹಾವ್ಯಾಪ್ತಿಯಲ್ಲಿ ಮಾನವ ಒಂದು 

ತುಣುಕು. ಮಾನವನ ಮಹಾವ್ಯಾಪ್ತಿಯಲ್ಲಿ ಪರಮಾಣು ಒಂದು ತುಣುಕು.


1784-ಅದಿರಿನಿಂದ ಕಬ್ಬಿಣ ಬೆರ್ಪಡಿಸುವ ವಿಧಾನದಲ್ಲಿ ಸುಧಾರಣೆ.


1785-ಜೇಮ್ಸ ವ್ಯಾಟ್ ರಿಂದ ಉಗಿ ಯಂತ್ರದ ಸುಧಾರಣೆ ಮತ್ತು ಬಟ್ಟೆ ತಯ್ಯಾರಿಕೆಯ  ಉದ್ಯೋಗದಲ್ಲಿ ಉಗಿ ಯಂತ್ರಗಳ ಯಾಂತ್ರಿಕ ಶಕ್ತಿಯ ಸಫಲ ಬಳಕೆ. ಉಗಿಯಂತ್ರಗಳು ಕಡಿಮೆ ವೆಚ್ಚದ ಯಾಂತ್ರಿಕ ಶಕ್ತಿಯ ಸಾಧನಗಳಾದವು.  ಯುರೋಪ ಖಂಡದಲ್ಲಿ ಔದ್ಯೋಗಿಕ ಕ್ರಾಂತಿ ಆರಂಭವಾಯಿತು. 


1794- ಫ್ರೆಂಚ್ ಕ್ರಾಂತಿಯಲ್ಲಿ ಲಾವೊಲಿಸಿಯರ್ ವಿಜ್ಞಾನಿಯನ್ನು ಗಲ್ಲಿಗೇರಿಸಲಾಯಿತು.


1800-ಅಲೆಸ್ಯಾಂಡ್ರೋ ವೋಲ್ಟಾ ರವರ ವಿದ್ಯುತ್ ಕೋಶದ ಆವಿಸ್ಕಾರ. Voltaic Pile


1808-ಡಾಲ್ಟನ್ ರ ಪರಮಾಣು ಸಿಧ್ಧಾಂತ ಮತ್ತು ಔದ್ಯೋಗಿಕ ರಸಾಯನ ಶಾಸ್ತ್ರದ ಬೆಳವಣಿಗೆ.

ಎಲ್ಲಾ  ವಸ್ತುಗಳು ಪರಮಾಣುಗಳೆಂಬ ಸೂಕ್ಷ್ಮ ಕಣಗಳಿಂದ ಆಗಿವೆ ಎಂದು ಡಾಲ್ಟನ್ ರವರು  ಪ್ರತಿಪಾದಿಸಿದರು. ಪರಮಾಣುಗಳನ್ನು ಪರಮಾಣು ರಾಶಿಯಿಂದ ಗುರುತಿಸಲಾಗುತ್ತಿತ್ತು. ಭಿನ್ನ ಭಿನ್ನ ಜಾತಿಯ ಧಾತುಗಳ ಪರಮಾಣುಗಳು ಭಿನ್ನ ಭಿನ್ನ ರಾಶಿಯನ್ನು ಹೊಂದಿವೆ ಎಂದು ಪ್ರತಿಪಾದಿಸಿದರು. 


1812-1824, ಯಾಂತ್ರಿಕ ಶಕ್ತಿ ಬಳಸಿ ಉಗಿ ಬಂಡಿಯ ನಿರ್ಮಾಣ ಮತ್ತು ಬ್ರಹತ ಪ್ರಮಾಣದಲ್ಲಿ ಸರಕು ಸಾಗಣೆ. [Stephenson was hired to build the 13-km Hetton colliery railway in 1820].This line used a gauge of 4 ft 8 in (1,422 mm). The rails used for the line were wrought-iron.


1828-ಸಮುದ್ರದ ಉಪ್ಪು ಬಳಸಿ ಸೋಡಾ ತಯ್ಯಾರಿಕೆ ಉದ್ಯೋಗ ಆರಂಭ ವಾಯಿತು. NaCl to Na2CO3

ಹೀಗೆ ರಾಸಾಯನ ಶಾಸ್ತ್ರದ ಬೆಳವಣಿಗೆ ಪ್ರಗತಿಯಲ್ಲಿ ಸಾಗಿತು.

1837- ತಂತಿಯಿಂದ ಮಾಹಿತಿ ಕಳುಹಿಸುವ ಸಾಧನದ ಆವಿಸ್ಕಾರ. Telegraph was invented.


1840-ರಾಸಾಯನಿಕ ವಿದ್ಯಾಲಯಗಳ ಸ್ಥಾಪನೆ.

1856-ಕಬ್ಬಿಣ ಮತ್ತು ಉಕ್ಕು ಉತ್ಪಾದನಾ ಸಾಮರ್ಥ್ಯೆಯ ಹೆಚ್ಚಳ. [Henry Bessemer’s process]

         could produce  5 tons in a heat of one hour.


1860- ಜರ್ಮನಿಯಲ್ಲಿ ಜಾಗತಿಕ ಮಟ್ಟದಲ್ಲಿ ಮೊಟ್ಟಮೊದಲ ರಾಸಾಯನಿಕ ವಿಜ್ಞಾನಿಗಳ ಕೂಟ.

           [The Karlsruhe Congress] Germany.

1869-ಸೈಬೇರಿಯಾದ ವಿಜ್ಞಾನಿ ಮೆಂಡೆಲೇವ್ ಅವರಿಂದ ಧಾತುಗಳ ಆವರ್ತಕ ಕೋಸ್ಟಕದ ಪರಿಕಲ್ಪನೆ.

ಹೀಗೆ ಅಧುನಿಕ ವಿಜ್ಞಾನ ಅಸ್ತಿತ್ವಕ್ಕೆ ಬಂದಿತು.

1876- ಅಮೆರಿಕಾ ದೇಶದಲ್ಲಿ ದೂರವಾಣಿಯ ಬಳಕೆ ಆರಂಭ. telephone was invented.

1894-ವಿಲಿಯಮ್  ರಾಮಸೇ  ಅವರಿಂದ ನಿಷ್ಕ್ರಿಯ ಅನಿಲಗಳ [Noble gases] ಶೋಧ .


1900 ರ  ಹೊತ್ತಿಗೆ ವಿಜ್ಞಾನಿಗಳು  90 ಪ್ರಕಾರದ  ವಿವಿಧ ಮೂಲವಸ್ತುಗಳನ್ನು ಕಂಡುಹಿಡಿದರು.


1900-ಭೌತ ವಿಜ್ಞಾನಿ ಪ್ಲ್ಯಾಂಕ್ ರಿಂದ ಶಕಲ  ಸಿಧಾಂತದ ಉಗಮವಾಯಿತು. [Quantum theory of radiation].


1905 ರಲ್ಲಿ ಐನ್ಸ್ಟೀನ್ ಎಂಬ ಮಹಾನ್ ವಿಜ್ಞಾನಿಯು ಸಾಪೇಕ್ಷೆ ಸಿಧಾಂತ ಬಳಸಿ;  ವಸ್ತು ಮತ್ತು ಶಕ್ತಿಯ ಸಂಬಂಧದ ಸೂತ್ರವನ್ನು ಪ್ರಕಟಿಸಿದರು.  E = mC2  ವಸ್ತು ಮತ್ತು ಶಕ್ತಿ ಎರಡು ಒಂದೇ ಇದ್ದು , ವಸ್ತುವನ್ನು ಶಕ್ತಿಯಾಗಿ  ರೂಪಾಂತರಿಸಬಹುದು ಎಂದರು.


ಮುಂದಿನ ಮೂರು ದಶಕಗಳಲ್ಲಿ ಪರಮಾಣುಗಳು ಇಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳೆಂಬ ಅತೀ ಸೂಕ್ಷ್ಮ   ಕಣಗಳಿಂದ ಆಗಿವೆ ಎಂದು ತಿಳಿಯಿತು.


1902- ಅಮೆರಿಕಾ ದೇಶದಲ್ಲಿ ವಿಮಾನ ತಯ್ಯಾರಿಸಲಾಯಿತು.

1912- ಮಾನವ  ದ್ವನಿಯ ರೇಡಿಯೋ ಪ್ರಸಾರ ಆರಂಭ. 


1913- ಬೊಹರ್ ರ ಜಲಜನಕ ಪರಮಾಣುವಿನ ರಚನಾ ವಿನ್ಯಾಸ. ಪರಮಾಣುವಿನ ಸ್ಥಿರ ಶಕ್ತಿಯ ಕವಚಗಳ ಕಲ್ಪನೆ. ಇಲೆಕ್ಟ್ರಾನ್ ಗಳು ನಿರ್ದಿಷ್ಟ ಕವಚದಲ್ಲಿ ಮಾತ್ರ ಇರಬಹುದಾದ ಕಲ್ಪನೆ. 


1928- ಶ್ರೋಡಿಂಗೆರ್ ವಿಜ್ಞಾನಿಯು ಪರಮಾಣು ರಚನೆಗೆ ಸಂಬಂಧಿಸಿದಂತೆ, ಶಕಲ ಸಿಧಾಂತದ ಮೂಲ ಸೂತ್ರವನ್ನು ಪ್ರಕಟಿಸಿದನು.   E𝟁 = H𝟁 , ಇದು ಎಲ್ಲಾ ಪರಮಾಣುಗಳ   ರಚನೆ ಅರಿಯಲು ಪೂರಕವಾಯಿತು.  ಪರಮಾಣುಗಳ s, p, d,  ಮತ್ತು  f,  ಉಪಕವಚಗಳ ಪರಿಚಯವಾಯಿತು.


 

1934 ರ ಹೊತ್ತಿಗೆ ಯುರೇನಿಯಂ ಪರಮಾಣುವನ್ನು ಒಡೆಯಬಹುದೆಂಬ ತಂತ್ರಗಾರಿಕೆ ಕರಗತವಾಯಿತು.

ಯುರೇನಿಯಂ-235, ಪರಮಾಣುಗಳನ್ನು ನ್ಯೂಟ್ರಾನ್ ಗಳಿಂದ ತಾಡಿಸಿದಾಗ, ಪರಮಾಣುವೂ ಒಡೆದು ತುಂಡರಿಸಿ, ಹಗುರವಾದ ಎರಡು ಪರಮಾಣುಗಳು ಉಂಟಾಗುತ್ತವೆ ಮತ್ತು ಜೊತೆಯಲ್ಲಿ ಅಪಾರ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ, ಎಂದು ಪ್ರಯೋಗಗಳಿಂದ ಖಚಿತವಾಯಿತು. 

ಇದು ಪರಮಾಣು ಬಾಂಬ್ ಗಳ ಉತ್ಪಾದನೆಗೆ ಕಾರಣವಾಯಿತು.

ಎರಡನೆಯ  ಜಾಗತಿಕ ಯುದ್ಧದಲ್ಲಿ ಅಮೆರಿಕಾ ದೇಶವು ಜಪಾನ್ ದೇಶದ ಮೇಲೆ ಪರಮಾಣು  ಬಾಂಬ್ ಪ್ರಯೋಗಿಸಿ ಕಂಡರಿಯದಷ್ಟು  ಭೀಕರವಾದ, ಮನುಕುಲದ ನಾಶಕ್ಕೆ ಕಾರಣವಾಯಿತು.


1950 ರ ನಂತರದಲ್ಲಿ ಇಲೆಕ್ಟ್ರಾನಿಕ್ಸ್ ಎಂಬ ಹೊಸ ತಂತ್ರಜ್ಞಾನದ ಉದಯವಾಯಿತು. ಇದರಿಂದ ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಹಾಗು ಗಣಕಯಂತ್ರಗಳ ಉಗಮವಾಯಿತು. ಇದು ದೈನಂದಿನ ಚಟುವಟಿಕೆಗಳ ರೀತಿಯಲ್ಲಿ ಅಪಾರ ಬದಲಾವಣೆಗೆ ಕಾರಣವಾಯಿತು.                                 






No comments:

Post a Comment