Wednesday, 23 September 2020

                          



ಅಧುನಿಕ ವಿಜ್ಞಾನದ ಹುಟ್ಟು

ಬಹಳ ಹಿಂದಿನ ಕಾಲದಲ್ಲಿ ಆದಿಮಾನವರು ಗುಹೆಗಳಲ್ಲಿ ವಾಸಿಸುತ್ತಿದ್ದರು. ಗುಂಪು ಗುಂಪಾಗಿ ಇರುತ್ತಿದ್ದರು.  ಪ್ರಾಣಿಗಳನ್ನು ಪಳಗಿಸುವ ಕಲೆ ಕಲಿತರು.ಕೃಷಿಯಲ್ಲಿ ಪರಿಣತಿ ಪಡೆದರು.

ಊರುಗಳು ಬೆಳೆದವು ಮತ್ತು ನಾಗರಿಕತೆ ವಿಸ್ತರಿಸಿತು.

ಪಶು ಸಾಕಣೆ ಮತ್ತು ಒಕ್ಕಲುತನದ್ಲಲಿ  ಮಾನವ ತೊಡಗಿಸಿಕೊಂಡ. ಗ್ರಹಣಿಯರು ಮನೆ ಕೆಲಸದಲ್ಲಿ ಹಾಗು ವ್ಯಾಪಾರಿಗಳು, ಉದ್ಯೋಗಿಗಳು ತಮ್ಮ ತಮ್ಮ ಕೆಲಸಗಳಲ್ಲಿ ತೆಡಗಿಸಿಕೊಂಡರು.

 

1200-ಇಟಲಿ ಹಾಗು ಇಂಗ್ಲೈಂಡಗಳಲ್ಲಿ ವಿಶ್ವವಿದ್ಯಾಲಯಗಳ ಆರಂಭ.

1300- ಲೋಹಗಳಿಗಾಗಿ ಹುಡುಕಾಟ.

ಬಂಗಾರ, ತಾಮ್ರ, ಲೋಹಗಳ ಶೋಧ ಮತ್ತು ಬಳಕೆ.


1400- ಹಡಗು ಕಟ್ಟಿ ಗಾಳಿಯ ಒತ್ತು-ಬಲವನ್ನು ಬಳಸಿ ಸಮುದ್ರದಲ್ಲಿ ತೇಲಾಟ ಮತ್ತು ಹೊಸ ಭೂಖಂಡಗಳ ಹುಡುಕಾಟ. ಕೊಲಂಬಸನ ಸಮುದ್ರಯಾನ, ವಸಾಹತುಗಳ ಸ್ಥಾಪನೆ.


ಆಧುನಿಕ ವಿಜ್ಞಾನ ಬೆಳೆದದ್ದು ಕ್ರಿಸ್ತ ಶಕ  1500 ರ ನಂತರದಲ್ಲಿ.


1600- ನಿಕೊಲಸ್ ಕೋಪರ್ನಿಕಸ್ ರ ಸೂರ್ಯಕೇಂದ್ರವಾದದಿಂದ ನವಚೇತನ ಆರಂಭ. ಖಗೋಳಶಾಸ್ತ್ರಕ್ಕೆ ಗೆಲಿಲಿಯೋ ಹಾಗು ಕೆಪ್ಲರರ ಕೊಡುಗೆ.


1600- ಸತ್ಯಾನ್ವೇಶಣೆಯ ಹೊಸ ತತ್ವಗಳು, ಮತ್ತು ಪ್ರಾಯೋಗಿಕ ಪರಿಶೀಲನಾ ಪಧತಿಯ ಉಗಮ.

ಪ್ರಯೋಗಗಳ ಆಧಾರದ ಮೇಲೆ ಸತ್ಯವನ್ನು ನಿರ್ಧರಿಸುವ ತೀರ್ಮಾನ.

1662-  ಲಂಡನನಲ್ಲಿ ರಾಯಲ್ ಸೊಸೈಟಿಯ ಸ್ಥಾಪನೆ.

1666- ತದನಂತರ  ಪ್ಯಾರಿಷ್ ನಲ್ಲಿ ಫ್ರೆಂಚ  ವಿಜ್ನ್ಯಾನ ಅಕಾಡಮಿಯ ಸ್ಥಾಪನೆ.

1661-ರಾಬರ್ಟ ಬಾಯ್ಲರವರ ವಾಯು ವತ್ತಡದ ನಿಯಮಗಳ ಶೋಧ. ಧಾತುವಿನ ಪರಿಕಲ್ಪನೆ.


1688- ಪ್ರಜಾಪ್ರಭುತ್ವಗಳ ಸ್ಥಾಪನೆ ಮತ್ತು ಸಾಮಾಜಿಕ ನ್ಯಾಯ, ಪ್ರಜಾಹಿತ ಕೆಲಸಗಳು.


1700- ಜರ್ಮನಿಯಲ್ಲಿ ಬರ್ಲಿನ್ ವಿಜ್ನ್ಯಾನ ಅಕಾಡಮಿ ಸ್ಥಾಪನೆ.

1746- ಔದ್ಯೋಗಿಕ ಗಂಧಕಾಮ್ಲದ ತಯ್ಯಾರಿಕೆ [Lead Chamber process].

1760-ಯುರೋಪ ಖಂಡದಲ್ಲಿ ಔದ್ಯೋಗಿಕ ಕ್ರಾಂತಿಯ ಆರಂಭ.

1769-ಪ್ರಥಮ ಬಾರಿಗೆ ಬಟ್ಟೆ ತಯ್ಯಾರಿಕೆಯಲ್ಲಿ ಉಗಿ ಯಂತ್ರದ ಬಳಕೆ.


1754-ಜೋಸೆಪ್ ಬ್ಲ್ಯಾಕ್ ರಿಂದ ಸುಣ್ಣದ ಕಲ್ಲಿನ ಪ್ರಯೋಗಗಳು. ಇಂಗಾಲದ ಡೈ ಆಕ್ಸಾಯಿಡ ಅನಿಲ ತಯ್ಯಾರಿಕೆ.

1766- ಹೆನ್ರಿ ಕೆವೆಂದಿಶ್ ರಿಂದ ಜಲಜನಕ ಅನಿಲದ ಅನ್ವೇಷಣೆ. 1784 ರಲ್ಲಿ ಹೆನ್ರಿ ಕೆವೆಂದಿಶ್ ಜಲಜನಕ ಉರಿದು  ನೀರು ಉಂಟಾಗುವುದನ್ನು ಅವಿಸ್ಕರಿಸಿದರು.

1779-ಲಾವೋಸಿಯರ್ ರಿಂದ ಉರಿಯುವ ಪರಿಕಲ್ಪನೆಯ ವಿವರಣೆಗಳು. ದಹನ ಕ್ರಿಯ ಯಲ್ಲಿ ಆಮ್ಲಜನಕ ಅನಿಲದ ಪಾತ್ರದ ಸತ್ಯ ವಿವರಣೆ. ಲಾವೋಸಿಯರರ ರಾಸಾಯನಿಕ ಶಾಸ್ತ್ರದ ತಳಹದಿ.


1784-ಅದಿರಿನಿಂದ ಕಬ್ಬಿಣ ಬೆರ್ಪಡಿಸುವ ವಿಧಾನದಲ್ಲಿ ಸುಧಾರಣೆ.


1785-ಜೇಮ್ಸ ವ್ಯಾಟ್ ರಿಂದ ಉಗಿ ಯಂತ್ರದ ಸುಧಾರಣೆ.

ಬಟ್ಟೆ ತಯ್ಯಾರಿಕೆಯ ಉದ್ಯೋಗದಲ್ಲಿ ಉಗಿ ಯಂತ್ರಗಳ ಸಫಲ ಬಳಕೆ. ಯಾಂತ್ರಿಕ ಶಕ್ತಿಯ ಬಳಕೆ. 

1812-1824, ಯಾಂತ್ರಿಕ ಶಕ್ತಿ ಬಳಸಿ ಉಗಿ ಬಂಡಿಯ ನಿರ್ಮಾಣ ಮತ್ತು ಬ್ರಹತ ಪ್ರಮಾಣದಲ್ಲಿ ಸರಕು ಸಾಗಣೆ. [Stephenson was hired to build the 13-km Hetton colliery railway in 1820].This line used a gauge of 4 ft 8 in (1,422 mm). The rails used for the line were wrought-iron.


1808-ಡಾಲ್ಟನ್ ರ ಪರಮಾಣು ಸಿಧ್ಧಾಂತ ಮತ್ತು ಔದ್ಯೋಗಿಕ ರಸಾಯನ ಶಾಸ್ತ್ರದ ಬೆಳವಣಿಗೆ.

1828-ಸಮುದ್ರದ ಉಪ್ಪು ಬಳಸಿ ಸೋಡಾ ತಯ್ಯಾರಿಕೆ.

ಹೀಗೆ ರಾಸಾಯನ ಶಾಸ್ತ್ರದ ಬೆಳವಣಿಗೆ ಪ್ರಗತಿಯಲ್ಲಿ ಸಾಗಿತು.

1840-ರಾಸಾಯನಿಕ ವಿದ್ಯಾಲಯಗಳ ಸ್ಥಾಪನೆ.

1850- ಕಬ್ಬಿಣ ಮತ್ತು ಉಕ್ಕು ಉತ್ಪಾದನಾ ಸಾಮರ್ಥ್ಯೆಯ ಹೆಚ್ಚಳ. 


1860- ಜರ್ಮನಿಯಲ್ಲಿ ಜಾಗತಿಕ ಮಟ್ಟದಲ್ಲಿ ಮೊಟ್ಟಮೊದಲ ರಾಸಾಯನಿಕ ವಿಜ್ಞಾನಿಗಳ ಕೂಟ.

1869-ಸೈಬೇರಿಯಾದ ವಿಜ್ಞಾನಿ ಮೆಂಡೆಲೇವ್ ಅವರಿಂದ ಧಾತುಗಳ ಆವರ್ತಕ ಕೋಸ್ಟಕದ ಪರಿಕಲ್ಪನೆ.

ಹೀಗೆ ಅಧುನಿಕ ವಿಜ್ಞಾನ ಅಸ್ತಿತ್ವಕ್ಕೆ ಬಂದಿತು.


No comments:

Post a Comment